ಜಾತಿ ಗಣತಿಯಲ್ಲಿ ಕಾಡುಗೊಲ್ಲ ಎಂದೇ ನಮೂದಿಸಿಶಿರಾ ತಾಲೂಕಿನ ಕಾಡುಗೊಲ್ಲ ಜನಾಂಗವು ರಾಜ್ಯ ಸರಕಾರವು ನಡೆಸುವ ಜಾತಿ ಗಣತಿಯಲ್ಲಿ ಕಾಡುಗೊಲ್ಲ ಜನಾಂಗ ಎಂದೇ ನಮೂದಿಸಬೇಕು. ಇದಕ್ಕೆ ಗ್ರಾಮದ ಮುಖಂಡರು, ಯುವಕರು, ವಿದ್ಯಾವಂತರೂ ಸಹಕರಿಸಬೇಕು ಎಂದು ಶಿರಾ ತಾಲೂಕು ಕರ್ನಾಟಕ ರಾಜ್ಯ ಕಾಡುಗೊಲ್ಲ ಸಂಘದ ಅಧ್ಯಕ್ಷ ಈಶ್ವರಪ್ಪ ಹೇಳಿದರು.