ಲ್ಯಾಂಡ್ ಜಿಹಾದ್ ಗೆ ಬಿಜೆಪಿ ಶಾಸಕ ಬೆಂಬಲಹತ್ತಾರು ವರ್ಷಗಳಿಂದ ದೇವಾಲಯವಿದ್ದ ಜಾಗ, ತರಕಾರಿ, ಹೂವು, ಹಣ್ಣು ಮಾರಾಟಗಾರಿಗೆ ಆಶ್ರಯವಾಗಿದ್ದ ಸಿದ್ಧಿವಿನಾಯಕ ಮಾರುಕಟ್ಟೆ ಜಾಗವನ್ನು ಮಂಗಳೂರಿನ ಕಣಚೂರು ಇಸ್ಲಾಮಿಕ್ ಎಜ್ಯುಕೇಷನ್ ಟ್ರಸ್ಟ್ ಗೆ ಸೇರಿದ ವ್ಯಕ್ತಿಗಳಿಗೆ ಮಾಲ್ ಕಟ್ಟಲು ಗುತ್ತಿಗೆ ನೀಡುವ ಮೂಲಕ ತುಮಕೂರು ನಗರದಲ್ಲಿ ಲ್ಯಾಂಡ್ ಜಿಹಾದ್ಗೆ ಬಿಜೆಪಿ ಶಾಸಕರು ಬೆಂಬಲವಾಗಿ ನಿಂತಿದ್ದಾರೆ ಎಂದು ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.