ಸೇವಾ ಮನೋಭಾವವೇ ನಿಜವಾದ ಉದ್ಯಮಶೀಲತೆತುಮಕೂರು ವಿಶ್ವವಿದ್ಯಾಲಯದ ಪ್ರೋತ್ಸಾಹದಿಂದ ತುಮಕೂರು ಇನ್ನೋವೇಶನ್ ಇಂಕ್ಯುಬೇಶನ್ ಆ್ಯಂಡ್ ಎಂಟ್ರಪ್ರಿನರ್‌ಶಿಪ್ ಕೌನ್ಸಿಲ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ಉದ್ಯಮಶೀಲತಾ ಬಿಸಿನೆಸ್ ಕಾನ್ಕ್ಲೇವ್ – ಅನ್ವಯ 2025 ಶನಿವಾರ ಯಶಸ್ವಿಯಾಗಿ ನೆರವೇರಿತು. ವಿವಿಧ ಕ್ಷೇತ್ರಗಳ ಗಣ್ಯರು ತಮ್ಮ ಚಿಂತನೆಗಳೊಂದಿಗೆ, ಜೀವನಾನುಭವಗಳೊಂದಿಗೆ, ಕೇವಲ ಲಾಭಕ್ಕಿಂತ ಹೆಚ್ಚಾಗಿ ಮೌಲ್ಯಾಧಾರಿತ ಉದ್ಯಮಶೀಲತೆಯ ಸಂದೇಶವನ್ನು ಹಂಚಿಕೊಂಡರು.