ನೀರಾವರಿ ಯೋಜನೆ ಜಾರಿಗೆ ಶ್ರೀಗಳ ಸಂಕಲ್ಪವೇ ಕಾರಣ: ರಾಜೇಶ್ಗೌಡತಾಲೂಕಿಗೆ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳಲು ನಂಜಾವಧೂತ ಶ್ರೀಗಳು ತಮ್ಮ ಹುಟ್ಟು ಹಬ್ಬವನ್ನು ನೀರಾವರಿ ಹಕ್ಕೊತ್ತಾಯ ಸಮಾವೇಶ ಮಾಡಿ ತಾಲೂಕಿಗೆ ನೀರಾವರಿ ಯೋಜನೆಗಳನ್ನು ತರಲೇಬೇಕೆಂದು ಒತ್ತಾಯಿಸಿದ ಪರಿಣಾಮವಾಗಿ ಮದಲೂರು ಕೆರೆಗೆ ಹೇಮಾವತಿ ನೀರು ಹರಿಯಿತು. ಅಪ್ಪರ್ ಭದ್ರ ಯೋಜನೆಯಲ್ಲಿ ತಾಲೂಕಿನ ೬೫ ಕೆರೆಗಳು ಸೇರ್ಪಡೆಯಾದವು ಎಂದು ಮಾಜಿ ಶಾಸಕ ಡಾ.ಸಿ.ಎಂ. ರಾಜೇಶ್ ಗೌಡ ಹೇಳಿದರು.