ನಡೆದಾಡಿದ ದೇವರಿಗೆ ನಾಡಿನ ಭಕ್ತರ ನಮನಎಣ್ಣೆ ಬತ್ತಿಗೂ ಕಾಸಿಲ್ಲದ ಹೊತ್ತಲ್ಲಿ ಸಿದ್ಧಗಂಗಾ ಮಠದ ಪೀಠಾರೋಹಣವೇರಿ ದೇಶವೇ ಇತ್ತ ಕಡೆ ತಿರುಗುವಂತೆ ಮಾಡಿ ಸಿದ್ಧಗಂಗೆಯನ್ನು ಶಿಕ್ಷಣ ಕಾಶಿಯನ್ನಾಗಿಸಿ ವಿಶ್ವ ವಿಖ್ಯಾತಗೊಳಿಸಿದ ತ್ರಿವಿಧ ದಾಸೋಹಿ, ಕಾಯಕ ಯೋಗಿ, ನಡೆದಾಡುವ ದೇವರು ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ 6 ನೇ ಪುಣ್ಯ ಸ್ಮರಣೆಗೆ ಸಹಸ್ರಾರು ಮಂದಿ ಭಕ್ತರು ಸಾಕ್ಷಿಯಾದರು.