ಗೋಹಿಂಸೆಯ ವಿರುದ್ಧ ಕೋಟಿ ವಿಷ್ಣು - ಶಿವ ನಾಮ ಜಪಕ್ಕೆ ಪೇಜಾವರ ಶ್ರೀ ಕರೆರಾಜ್ಯದಲ್ಲಿ ಕಂಡು ಕೇಳರಿಯದಂತೆ ಗೋವುಗಳ ಮೇಲೆ ಬೀಭತ್ಸ ಹಿಂಸೆ, ಆಕ್ರಮಣಗಳು ನಡೆಯುತ್ತಿದ್ದು, ಇದಕ್ಕೆ ಕಾರಣರಾದವರ ಮೇಲೆ ಯಾವುದೇ ಕಾನೂನಿನ ಅಂಕುಶ ಮತ್ತು ಶಿಕ್ಷೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜ.23ರಿಂದ ಜ.29ರ ತನಕ ನಾಡಿನಾದ್ಯಂತ ಕೋಟಿ ವಿಷ್ಣು ಸಹಸ್ರನಾಮ ಪಾರಾಯಣ ಅಥವಾ ಶಿವಪಂಚಾಕ್ಷರ ಜಪ ಅಭಿಯಾನ ಸಂಕಲ್ಪಿಸಿದ್ದೇವೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ತಿಳಿಸಿದ್ದಾರೆ.