ದಾಖಲೆಗಳ ಪುಸ್ತಕ ಸೇರಿದ ಮಣಿಪಾಲ ಮನೋಹರ್ ರಚಿಸಿದ ಬೈನಾವ್ಯೂವರ್!4 ಅಡಿ ಉದ್ದದ ಬೈನಾವ್ಯೂವರ್, 2 ಕೆಜಿ ತೂಕವಿದ್ದು, ಪಿವಿಸಿ ಪೈಪುಗಳು ಮತ್ತು ದರ್ಪಣಗಳನ್ನು ಬಳಸಿ ರಚಿಸಲಾಗಿದೆ. 200 - 240 ಎಕ್ಸ್ ಝೂಮ್ ಹೊಂದಿರುವ ಈ ಬೈನಾವ್ಯೂವರ್‌ನಲ್ಲಿ ಚಂದ್ರನ ಮೇಲ್ಮೈಯ ಕುಳಿಗಳನ್ನು, 3 ಕಿ.ಮೀ. ದೂರದಲ್ಲಿರುವ ಗುಬ್ಬಚ್ಚಿಯನ್ನೂ ಸ್ಪಷ್ಟವಾಗಿ ನೋಡುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ ಸುಮಾರು 85 ಸಾವಿರ ರು. ವೆಚ್ಚವಾಗಿದೆ.