ಬಿಜೆಪಿಯದ್ದು ಚೊಂಬು ಮಾದರಿ: ಸುರ್ಜೆವಾಲ ಲೇವಡಿಸೋಮವಾರ ಉಡುಪಿಯಲ್ಲಿ ಕಾಂಗ್ರೆಸ್ ಪ್ರಮುಖರ ಸಭೆ ನಡೆಸಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ರಾಜ್ಯದಲ್ಲೀಗ ಮತದಾರರ ಎದುರು ಎರಡು ಮಾದರಿಯ ಆಯ್ಕೆಗಳಿವೆ, ಒಂದು ಕಾಂಗ್ರೆಸ್ ಸರ್ಕಾರದ ನುಡಿದಂತೆ ನಡೆಯುವ ಗ್ಯಾರಂಟಿ ಮಾದರಿ, ಇನ್ನೊಂದು ಬಿಜೆಪಿಯ ಚೊಂಬು ಗ್ಯಾರಂಟಿಯ ಮಾದರಿ ಎಂದು ಲೇವಡಿ ಮಾಡಿದರು.