ಹದಗೆಟ್ಟ ರಸ್ತೆಗೆ ಗ್ರಾಮಸ್ಥರಿಂದ ಕಾಯಕಲ್ಪಇವರು ರಸ್ತೆ ಹದಗೆಟ್ಟಿದೆ ಎಂದು ಪ್ರತಿಭಟನೆ ಮಾಡಲಿಲ್ಲ, ರಸ್ತೆ ದುರಸ್ತಿ ಮಾಡುವಂತೆ ಜನಪ್ರತಿನಿಧಿಗಳು ಅಧಿಕಾರಿಗಳು ಗ್ರಾಮ ಪಂಚಾಯಿತಿಗೆ ಅಲಿಯಲಿಲ್ಲ, ಯಾರನ್ನೂ ದೋಷಿಸಲಿಲ್ಲ ಅದರ ಬದಲು ತಾವೇ ಮುಂದಾಗಿ ರಸ್ತೆಯಲ್ಲಿ ಬಿದ್ದಿರುವ ದೊಡ್ಡ ಮತ್ತು ಸಣ್ಣ ಗಾತ್ರದ ಗುಂಡಿ, ತಗ್ಗುಗಳನ್ನು ಸ್ವತಃ ತಾವೇ ಜಲ್ಲಿಕಲ್ಲು, ಮಣ್ಣು ತುಂಬಿಸುವ ಮೂಲಕ ರಸ್ತೆ ಸರಿಪಡಿಸಿಕೊಂಡರು.