ಸಿದ್ದಾಪುರದ ಹಲಗಡಿಕೊಪ್ಪದಲ್ಲಿ ಇಂದು ಸಮುದಾಯ ಭವನಕ್ಕೆ ಶಂಕುಸ್ಥಾಪನೆಸಿದ್ದಾಪುರ ತಾಲೂಕಿನ ಕರೆ ಒಕ್ಕಲಿಗರ ಸಂಘ ಹಲಗಡಿಕೊಪ್ಪದಲ್ಲಿ ನಿರ್ಮಿಸಲಿರುವ ಸಮುದಾಯ ಭವನದ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಏ. ೧೧ರಂದು ಅಪರಾಹ್ನ 12.30ಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ನೆರವೇರಿಸಲಿದ್ದಾರೆ.