ಲೈಟ್ ಫಿಶಿಂಗ್‌ನಿಂದ ಮತ್ಸ್ಯಕ್ಷಾಮ ಎನ್ನುವುದು ಸುಳ್ಳು: ನವೀನ ಬಂಗೇರಾಲೈಟ್ ಫಿಶಿಂಗ್ ನಮ್ಮ ಕರಾವಳಿಯ ಸಮಸ್ಯೆ ಮಾತ್ರವಲ್ಲ, ನಾವು ಬೆಳಕು ಮೀನುಗಾರಿಕೆಯನ್ನು ಮಾಡದೇ ಇದ್ದರೂ ನಮ್ಮ ಕರಾವಳಿಯ ಹೊರಭಾಗದಲ್ಲಿ ಬೇರೆ ರಾಜ್ಯದವರು ಬಂದು ಮೀನುಗಾರಿಕೆ ಮಾಡುತ್ತಾರೆ. ಅದೇ ರೀತಿಯಾಗಿ ನಮ್ಮ ದೇಶದ ಗಡಿಭಾಗದಲ್ಲಿ ಬೇರೆ ರಾಷ್ಟ್ರದವರು ಬಂದು ಮೀನುಗಾರಿಕೆ ಮಾಡುತ್ತಾರೆ ಎಂದು ಮಲ್ಪೆಯ ಅಖಿಲ ಕರ್ನಾಟಕ ಪರ್ಸಿನ್ ಮೀನುಗಾರರ ಸಂಘದ ಉಪಾಧ್ಯಕ್ಷ, ಮಂಗಳೂರಿನ ನವೀನ ಬಂಗೇರಾ ಹೇಳಿದ್ದಾರೆ.