ಮಾದೇವ ನಾಯ್ಕ ದಂಪತಿಯಿಂದ ಶಾಲೆಗೆ 4 ಗುಂಟೆ ಜಾಗ ದಾನತಾಲೂಕಿನ ಬೆಳಕೆ ಕಲಬಂಡಿಯ ಮಾದೇವ ನಾಯ್ಕ ದಂಪತಿ ಇತ್ತೀಚೆಗೆ ಜಾಗವೊಂದನ್ನು ಖರೀದಿ ಮಾಡಿದ್ದರು. ತಾವು ಖರೀದಿಸಿದ ಸ್ಥಳದಲ್ಲಿ ಹೇರಬುಡಕಿ ಸರ್ಕಾರಿ ಕಿರಿಯ ಪ್ರಾಥಮಿ ಶಾಲೆ ಇರುವುದನ್ನು ಮನಗಂಡ ಅವರು ಶಾಲೆ ಇರುವ ನಾಲ್ಕು ಗುಂಟೆ ಸ್ಥಳವನ್ನು ದಾನವಾಗಿ ನೀಡಲು ನಿರ್ಧರಿಸಿ ಅಗತ್ಯದ ಕಾಗಪತ್ರಗಳನ್ನು ತಾವೇ ತಯಾರಿಸಿ ಶಾಲೆಗೆ ಹಸ್ತಾಂತರಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.