ಜಿಪಂನ ₹350 ಕೋಟಿ ಕ್ರಿಯಾಯೋಜನೆಗೆ ಅನುಮೋದನೆ2024- 25ನೇ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಅಧೀನ ಇಲಾಖೆಗಳಲ್ಲಿ ₹4011.05 ಲಕ್ಷ ವೆಚ್ಚದಲ್ಲಿ ಫಲಾನುಭವಿ ಕಾರ್ಯಕ್ರಮಗಳು, ₹26810.88 ಲಕ್ಷ ವೆಚ್ಚದಲ್ಲಿ ವೇತನ, ಹೊರಗುತ್ತಿಗೆ, ದಿನಗೂಲಿ ಸಿಬ್ಬಂದಿ ವೇತನ ಮತ್ತು ಕಚೇರಿ ವೆಚ್ಚ, ₹1421.99 ಲಕ್ಷ ಮೊತ್ತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ₹1014.13 ಲಕ್ಷ ವೆಚ್ಚದಲ್ಲಿ ಇತರೇ ಕಾರ್ಯಕ್ರಮಗಳು ಸೇರಿದಂತೆ ಒಟ್ಟು ₹35058.05 ಲಕ್ಷ ಕ್ರಿಯಾಯೋಜನೆಯನ್ನು ರೂಪಿಸಲಾಗಿದೆ.