• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • uttara-kannada

uttara-kannada

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಮರಳಿನಲ್ಲಿ ಸಿಲುಕಿದ್ದ ಬೋಟ್‌ ಹೊರಕ್ಕೆ
ಕಾರವಾರ ರವೀಂದ್ರನಾಥ ಟಾಗೋರ್ ಕಡಲ ತೀರದಲ್ಲಿ ಮರಳಿನಲ್ಲಿ ಸಿಲುಕಿದ್ದ ಮೀನುಗಾರಿಕಾ ಬೋಟ್ ಬುಧವಾರ ಮೇಲೆತ್ತಲಾಗಿದೆ.
ಸಮುದ್ರದಲ್ಲಿ ಮುಳುಗುತ್ತಿದ್ದ 8 ಪ್ರವಾಸಿಗರ ರಕ್ಷಣೆ
ಸಮುದ್ರ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ಒಟ್ಟು 8 ಪ್ರವಾಸಿಗರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಣೆ ಮಾಡಿದ ಎರಡು ಪ್ರತ್ಯೇಕ ಘಟನೆ ಗೋಕರ್ಣ ಮುಖ್ಯ ಕಡಲತೀರದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
2024 ವರ್ಷಾಂತ್ಯಕ್ಕೆ 3ನೇ ವಿಶ್ವಹವ್ಯಕ ಸಮ್ಮೇಳನ
ಡಿಸೆಂಬರ್ 2024ರಲ್ಲಿ "3ನೇ ವಿಶ್ವ ಹವ್ಯಕ ಸಮ್ಮೇಳನ " ಆಯೋಜಿಸಲಾಗುವುದು ಎಂದು ಬೆಂಗಳೂರಿನಲ್ಲಿ ನಡೆದ ಹವ್ಯಕ ಮಹಾಸಭೆಯ ಸರ್ವಸದಸ್ಯರ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಡಾ. ಗಿರಿಧರ ಕಜೆ ಘೋಷಿಸಿದ್ದದಾರೆ.
ಹಿಂದೂ ಸಮಾಜ ಜಾಗೃತಗೊಳಿಸಲು ರಥಯಾತ್ರೆ
ಹಿಂದೂ ಸಮಾಜ ಜಾಗೃತಗೊಳಿಸಲು ಹಾಗೂ ನಮ್ಮ ಯುವಸಮೂಹವನ್ನು ಬಡಿದೆಬ್ಬಿಸುವ ಉದ್ದೇಶದಿಂದ ಇಂದು ದೇಶದೆಲ್ಲೆಡೆ ಶೌರ್ಯ ಜಾಗರಣಾ ರಥಯಾತ್ರೆ ನಡೆಸಲಾಗುತ್ತಿದೆ ಎಂದು ಹಳಿಯಾಳ ತಾಲೂಕು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಶ್ರೀಪತಿ ಭಟ್ ಹೇಳಿದರು.ಭಾನುವಾರ ಸಂಜೆ ಶ್ರೀ ಗಣೇಶ ದೇವಸ್ಥಾನದ ಬಳಿ ತಾಲೂಕು ವಿ.ಎಚ್.ಪಿ ಮತ್ತು ಭಜರಂಗದಳದವರು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪಟ್ಟಣಕ್ಕೆ ಆಗಮಿಸಿದ ಶೌರ್ಯ ಜಾಗರಣಾ ಯಾತ್ರೆ ಬರಮಾಡಿಕೊಂಡು ಮಾತನಾಡಿದರು.
ಆಟೋದಲ್ಲಿ ಮಹಿಳೆ ಬಿಟ್ಟು ಹೋದ ಬ್ಯಾಗ್ ಮರಳಿಸಿದ ಚಾಲಕ
ಮಹಿಳಾ ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟು ಹೋಗಿದ್ದ ಚಿನ್ನಾಭರಣ ಹಾಗೂ ನಗದನ್ನು ಮಹಿಳೆಗೆ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕನ ಕಾರ್ಯಕ್ಕೆ ಮೆಚ್ಚಿ ಮುರುಡೇಶ್ವರ ಪೊಲೀಸರು ಸನ್ಮಾನಿಸಿದರು.ಕಾಯ್ಕಿಣಿಯ ಶಿರಾಣಿಯ ಚಂದ್ರು ರಾಮ ನಾಯ್ಕ ಎನ್ನುವವರ ಆಟೋದಲ್ಲಿ ಬಸ್ತಿ ಕಾಯ್ಕಿಣಿಯ ದೇವಿಕಾನಿನ ವಿಜಯಲಕ್ಷ್ಮಿ ಎಂಬಾಕೆ ಭಟ್ಕಳ ತೆಂಗಿನ ಗುಂಡಿಯಲ್ಲಿರುವ ತನ್ನ ತಾಯಿಯ ಮನೆಗೆ ಪ್ರಯಾಣಿಸುವ ವೇಳೆ ಚಿನ್ನಾಭರಣವುಳ್ಳ ಬ್ಯಾಗನ್ನು ಆಟೋದ ಹಿಂಭಾಗದಲ್ಲಿ ಬಿಟ್ಟು ತೆರಳಿದ್ದಳು.
ಪಾತ್ರಗಳಿಗೆ ಜೀವ, ಭಾವ ತುಂಬುತ್ತಿದ್ದ ಕಲಾವಿದ ವಿಷ್ಣು ಭಟ್ ಮೂರೂರು
ಪ್ರಸಿದ್ಧ ಯಕ್ಷಗಾನ ಕಲಾವಿದ ವಿಷ್ಣು ಭಟ್ ಮೂರೂರು ನಿಧನರಾಗಿದ್ದು, ಯಕ್ಷ ಪರಂಪರೆಯ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ.ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸ್ತ್ರೀಪಾತ್ರದ ಮೂಲದ ಯಕ್ಷಪ್ರಿಯರ ಮನಗೆದ್ದ ವಿಷ್ಣು ಭಟ್ ಮೂರೂರು ಯಕ್ಷಗಾನದ ಹಲವು ಪಾತ್ರಗಳಿಗೆ ಜೀವ ತುಂಬುವ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.ಎಸ್‌ಎಸ್‌ಎಲ್‌ಸಿ ಪೂರೈಸುತ್ತಿದ್ದಂತೆ ಯಕ್ಷಗಾನ ಕ್ಷೇತ್ರಕ್ಕೆ ಕಾಲಿಟ್ಟ ಅವರು ಮೂರೂರು ರಾಮ ಹೆಗಡೆ, ಕರ್ಕಿಯ ಪಿ.ವಿ. ಹಾಸ್ಯಗಾರ ಅವರಿಂದ ಆರಂಭಿಕ ತರಬೇತಿ ಪಡೆದರು. ಸ್ತ್ರೀಯ ಒನಪು ಒಯ್ಯಾರ, ಭಾವಪೂರ್ಣ ಮಾತು, ಲಾಲಿತ್ಯಪೂರ್ಣ ಕುಣಿತಗಳಿಂದ ಹೆಸರಾದರು.
ಅತಿಕ್ರಮಣ ಖುಲ್ಲಾ: ಅಧಿಕಾರಿಗಳ ಎದುರೇ ವಿಷ ಸೇವಿಸಿದ ರೈತ
ಕಂದಾಯ ಇಲಾಖೆ ಅಧಿಕಾರಿಗಳು ಅತಿಕ್ರಮಣ ಖುಲ್ಲಾಪಡಿಸಲು ಆಗಮಿಸಿದ್ದರಿಂದ ರೈತನೋರ್ವ ಎಲ್ಲರ ಎದುರೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ತನಾದ ಘಟನೆ ಶಿರಸಿ ತಾಲೂಕಿನ ದೊಡ್ನಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಈ ಘಟನೆ ಬಳಿಕ ಅಧಿಕಾರಿಗಳು ತೆರವು ಕಾರ್ಯಾಚರಣೆ ಮೊಟಕುಗೊಳಿಸಿದ್ದಾರೆ.
ಮಿರ್ಜಾನದಲ್ಲಿ ಈದ್ ಮೆರವಣಿಗೆ ವೇಳೆ ರಾಷ್ಟ್ರಧ್ವಜಕ್ಕೆ ಅವಮಾನ, ಪ್ರಕರಣ ದಾಖಲು
ಈದ್‌ಮಿಲಾದ ದಿನ ಕುಮಟಾ ತಾಲೂಕಿನ ಮಿರ್ಜಾನಿನಲ್ಲಿ ಸ್ಥಳೀಯ ಜಮಾತುಲ್ ಮುಸ್ಲಿಮೀನ್ ಸಮಿತಿ ನಡೆಸಿದ ಮೆರವಣಿಗೆ ವೇಳೆ ರಾಷ್ಟ್ರಧ್ವಜದ ಅಶೋಕ ಚಕ್ರದ ಜಾಗದಲ್ಲಿ ಚಂದ್ರ ಮತ್ತು ನಕ್ಷತ್ರದ ಚಿತ್ರ ಬರೆದ ಧ್ವಜ ಹಾರಾಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೃಷಿ ಪಂಪ್‌ಸೆಟ್‌ಗೆ ಸೋಲಾರ್
ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ಮೂಲಕ ವಿದ್ಯುತ್ ಒದಗಿಸಲು ಶಿರಸಿ ಹೆಸ್ಕಾಂ ವಿಭಾಗ ಚಿಂತನೆ ನಡೆಸಿದ್ದೆದು ಈ ಕುರಿತಂತೆ ಸಾಧ್ಯಾ-ಅಸಾಧ್ಯತೆ ಕುರಿತು ತಳ ಮಟ್ಟದ ಸಮೀಕ್ಷೆ ಆರಂಭಿಸಿದೆ.
ದರೋಡೆ ಪ್ರಕರಣ, ನಾಲ್ವರಿಗೆ 10 ವರ್ಷ ಕಠಿಣ ಶಿಕ್ಷೆ
ನಾಲ್ಕು ವರ್ಷಗಳ ಹಿಂದೆ ಮುಂಡಗೋಡ ಪಟ್ಟಣವನ್ನೇ ತಲ್ಲಣಗೊಳಿಸಿದ ಟಿಬೇಟಿಯನ್ ಕಾಲನಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳಾದ ವಸಂತ ಕರಿಯಪ್ಪ ಕೊರವರ, ಮಂಜು ಅರ್ಜುನ ನವಲೆ, ಕಿರಣ ಪ್ರಕಾಶ ಸೂಳಂಕಿ ಹಾಗೂ ಮಧುಸಿಂಗ್‌ ಗಂಗಾರಾಮ ಸಿಂಗ್‌ ರಜಪೂತ ಆರೋಪಿಗಳಿಗೆ ಕಲಂ.೩೯೫ ಐಪಿಸಿಯಂತೆ ೧೦ ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ ₹ ೧೦,೦೦೦ ದಂಡ ತಪ್ಪಿದ್ದಲ್ಲಿ ೧ ವರ್ಷ ಕಾರಾಗೃಹ ಶಿಕ್ಷೆ, ಕಲಂ.೩೯೭ ಐಪಿಸಿಯಂತೆ ೭ ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಎಲ್ಲ ಆರೋಪಿತರಿಗೂ ತಲಾ ₹ ೫,೦೦೦ ದಂಡ, ತಪ್ಪಿದಲ್ಲಿ ೬ ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
  • < previous
  • 1
  • ...
  • 490
  • 491
  • 492
  • 493
  • 494
  • 495
  • 496
  • 497
  • 498
  • next >
Top Stories
ಚಿಕ್ಕಮಗಳೂರಿನಲ್ಲಿ ನೂತನ ತಿರುಪತಿ ರೈಲು ಸಂಚಾರಕ್ಕೆ ನಮಸ್ಕರಿಸಿದ ಮಹಿಳೆ
ಆಸ್ತಿ ಸರ್ಕಾರಕ್ಕೆ ನೀಡುವೆ : ಶಾಸಕ ಎಸ್.ಎನ್.ಸುಬ್ಬಾರೆಡ್ಡಿ
ರವಿಶಂಕರ್‌ ಗುರೂಜಿ ಬಯೋಪಿಕ್‌ನಲ್ಲಿ ನಟಿಸಲು ವಿಕ್ರಾಂತ್‌ ಮಾಸಿ ತಯಾರಿ
ತಿರುಪತಿ - ಚಿಕ್ಕಮಗಳೂರು ನೂತನ ರೈಲು ಸಂಚಾರಕ್ಕೆ ಚಾಲನೆ
ಕಾಂಗ್ರೆಸ್‌ನಿಂದ ಜನತೆಯ ಸುಲಿಗೆ: ನಿಖಿಲ್‌ ಕುಮಾರಸ್ವಾಮಿ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved