ಅಕ್ಟೋಬರ್ನಲ್ಲೇ ಬೇಸಿಗೆ ನೆನಪಿಸುವ ಕೆರೆಗಳು!ಕೂಡ್ಲಿಗಿ ತಾಲೂಕಿನಲ್ಲಿ 80ಕ್ಕೂ ಹೆಚ್ಚು ಕೆರೆ, ಕಟ್ಟೆಗಳಿದ್ದು, ಪ್ರತಿವರ್ಷ ಜನವರಿ, ಫೆಬ್ರುವರಿ ತಿಂಗಳಲ್ಲಿ ನೀರು ಖಾಲಿಯಾಗುತ್ತಿದ್ದವು. ಆದರೆ ಈ ಬಾರಿ ಈಗಲೇ ಖಾಲಿಯಾಗುತ್ತಿದ್ದು, 50 ವರ್ಷಗಳ ಹಿಂದಿನ ಬರ ನೆನಪು ಆಗುತ್ತಿದೆ. ಅಕ್ಟೋಬರ್ನಲ್ಲಿಯೇ ತಾಲೂಕಿನ 75ಕ್ಕೂ ಹೆಚ್ಚು ಕೆರೆಗಳು ನೀರಿಲ್ಲದೇ ಬಣಗುಡುತ್ತಿವೆ. ಇದು ಭೀಕರ ಬರದ ಮುನ್ಸೂಚನೆ. ಈಗಲೇ ಕೆರೆಗಳಲ್ಲಿ ನೀರಿಲ್ಲದಿದ್ದರೆ ಈ ವರ್ಷದ ಬೇಸಿಗೆ ಕಳೆಯುವುದು ಹೇಗೆ ಎಂಬುದು ರೈತರ ಚಿಂತೆ.