ನಾಗಠಾಣದಲ್ಲಿ ಗ್ರಾಮದೇವಿಯರ ಜಾತ್ರೆ ಸಂಭ್ರಮಕನ್ನಡಪ್ರಭ ವಾರ್ತೆ ವಿಜಯಪುರ ಇತಿಹಾಸ ಪ್ರಸಿದ್ಧ ಗ್ರಾಮದೇವತೆಯರಾದ ಶ್ರೀ ಲಕ್ಷ್ಮೀ ಮತ್ತು ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಸಂಭ್ರಮದಿಂದ ಜರುಗಿತು. ಸಾರವಾಡದ ಬಸವೇಶ್ವರ ಗೊಂಬೆ ಕುಣಿತ, ಅಜನಾಳದ ಕರಡಿ ಮಜಲು, ನಾಗಠಾಣ, ಗೂಗದಡ್ಡಿಯ ಡೊಳ್ಳು ಕುಣಿತ, ಅಥಣಿಯ ವಾದ್ಯಮೇಳ, ಕಲಬುರಗಿಯ ಪೋತರಾಜನ ಕುಣಿತ ಸೇರಿದಂತೆ ವಿವಿಧ ವಾದ್ಯವೈಭವ, ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಮೆರವಣಿಗೆ ಅಪಾರ ಭಕ್ತ ಸಮೂಹದ ಮಧ್ಯೆ ನಡೆಯಿತು.