ಭಾವೈಕ್ಯತೆ ಸಂದೇಶ ಸಾರುತ್ತಿದೆ ತಾಳಿಕೋಟೆಕನ್ನಡಪ್ರಭ ವಾರ್ತೆ ತಾಳಿಕೋಟೆ ಹೋಬಳಿ ಮಟ್ಟದ ಗ್ರಾಮವಾಗಿದ್ದ ತಾಳಿಕೋಟೆ ಇಂದು ಇತಿಹಾಸ ಪ್ರಸಿದ್ಧ ವಿದ್ಯಾಕೇಂದ್ರ, ವಾಣಿಜ್ಯ ಕೇಂದ್ರ, ಆಧ್ಯಾತ್ಮಿಕ, ಧಾರ್ಮಿಕ ಕೇಂದ್ರವಾಗಿ ಜಿಲ್ಲೆಯಲ್ಲಿಯೇ ಮುಂಚೂಣಿಯಲ್ಲಿದೆ. ಇಲ್ಲಿಯ ಮಠ, ಮಂದಿರ, ಮಸೀದಿ, ದರ್ಗಾಗಳು ಭಾವೈಕ್ಯತೆಯ ಸಂದೇಶ ಸಾರುತ್ತಿವೆ. ಡೋಣಿ ಬೆಳೆದರೆ ಓಣಿಯೆಲ್ಲ ಜೋಳ ಎಂಬ ನಾಣ್ಣುಡಿಯಂತೆ ಡೋಣಿ ನದಿ ಕಪ್ಪುಮಣ್ಣಿನ ಎರೆಭೂಮಿ ಅತ್ಯಂತ ಫಲವತ್ತಾದ ಪ್ರದೇಶ. ಹಿಡಿ ಬಿತ್ತಿದರೆ ಖಂಡುಗ ಬೆಳೆಯಬಲ್ಲ ಖ್ಯಾತಿ ತಾಳಿಕೋಟೆಗಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಡಾ.ಜಿ.ಎಂ.ಘೀವಾರಿ ನುಡಿದರು.