ನಮ್ಮ ತಂಡ ದೆಹಲಿಗೆ ಹೋಗುತ್ತೇವೆ. ಯಡಿಯೂರಪ್ಪ ಹಾಗೂ ಅವನ ಮಗನ ಕರ್ಮಕಾಂಡಗಳ ಬಗ್ಗೆ ಹೈಕಮಾಂಡ್ ಮುಂದೆ ಹೇಳಲು ಹೊರಟಿದ್ದೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ಬಸವನಬಾಗೇವಾಡಿ ನನಗೂ ಸೇರಿದಂತೆ ಎಲ್ಲರಿಗೂ ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗುವ ಆಸೆಯಿರುತ್ತದೆ. ಆದರೆ, ಅರ್ಹರು ಪ್ರಧಾನಿಯೋ ಅಥವಾ ಮುಖ್ಯಮಂತ್ರಿ ಆಗುತ್ತಾರೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಆನೆಕಾಲು ರೋಗ ತಡೆಗೆ ಡಿ.ಈ.ಸಿ ಮಾತ್ರೆ ನುಂಗುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದು ಸಾರ್ವಜನಿರಿಗೆ ಮನವರಿಕೆ ಮಾಡಿ, ಜಾಗೃತಿ ಮೂಡಿಸುವ ಕಾರ್ಯವನ್ನು ಸಂಬಂಧಿಸಿದ ಇಲಾಖೆಗಳು ಯಶಸ್ವಿಯಾಗಿ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೂಚಿಸಿದರು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲ ಪಕ್ಷಗಳು ಹಾಳಾಗಿವೆ. ಅದರಲ್ಲಿ ನಾನು ಜೀವನ ಪೂರ್ತಿ ಕಳೆದ ಭಾರತೀಯ ಜನತಾ ಪಾರ್ಟಿ ಕಥೆ ಹಾಳಾಗಿದ್ದು, ಬಿಜೆಪಿಗೆ ಸಿದ್ದಾಂತವೇ ಇಲ್ಲ ಎಂಬಂತಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.