ಕತ್ತೆ ಬಂಡವಾಳ ತೋರಿಸಿ ಕೋಟಿಗಟ್ಟಲೇ ಪಂಗನಾಮ!ಕನ್ನಡಪ್ರಭ ವಾರ್ತೆ ವಿಜಯಪುರ ಕೇವಲ ಮೂರು ಲಕ್ಷ ಬಂಡವಾಳ ಹಾಕಿದರೆ ಸಾಕು ತಿಂಗಳಿಗೆ ಲಕ್ಷ ಲಾಭ ಸಿಗಲಿದೆ ಎಂದು ನಂಬಿಸಿ ಕಂಪನಿಯೊಂದು ವಿಜಯಪುರ, ವಿಜಯನಗರ, ಬಳ್ಳಾರಿ, ಬಾಗಲಕೋಟೆ, ರಾಯಚೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೂರಾರು ಜನರಿಗೆ ವಂಚನೆ ಮಾಡಿದೆ. ಕತ್ತೆ ಹಾಲಿನ ವ್ಯಾಪಾರ ಮಾಡಿ ಎಂದು ನಂಬಿಸಿದ ತಂಡ ಅಮಾಯಕರಿಂದ ₹13.50 ಕೋಟಿ ಹಣ ಕಟ್ಟಿಸಿಕೊಂಡು ಪರಾರಿಯಾಗಿದೆ. ಈ ಡಾಂಕಿ ಮಿಲ್ಕ್ ನಂಬಿದವರೆಲ್ಲ ಮೋಸಕ್ಕೆ ಒಳಗಾಗಿದ್ದಾರೆ. ಇನ್ನು, ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಲು ಪೊಲೀಸರು ಕೂಡ ಚಿಂತನೆ ನಡೆಸಿದ್ದಾರೆ.