ತಾಯ್ನಾಡಿಗೆ ಆಗಮಿಸಿದ ಯೋಧನಿಗೆ ಅದ್ದೂರಿ ಸ್ವಾಗತಕನ್ನಡಪ್ರಭವಾರ್ತೆ ಬಸವನಬಾಗೇವಾಡಿ 21 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ತಾಯ್ನಾಡಿಗೆ ಆಗಮಿಸಿದ ಯೋಧ ಮಹಾಂತೇಶ ನಾಗಪ್ಪ ಯರನಾಳ ಅವರನ್ನು ಸ್ವಾಗಿತಿಸಿ ಪಟ್ಟಣದ ಯಾತ್ರಿ ನಿವಾಸದಲ್ಲಿ ಸನ್ಮಾನಿಸಲಾಯಿತು. ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸೈನಿಕ, ಶಿಕ್ಷಕ,ಕೃಷಿಕ ಈ ಮೂವರು ದೇಶಕ್ಕೆ ಅತಿ ಅಗತ್ಯವಾಗಿ ಬೇಕು. ಇವರೆಲ್ಲರ ಸೇವೆ ಅತ್ಯಮೂಲ್ಯ. ಇವರ ಸೇವೆ ಅನನ್ಯ. ಈ ಮೂರು ರತ್ನಗಳಿಗೆ ಎಲ್ಲರೂ ಸದಾ ಗೌರವಿಸಬೇಕೆಂದರು.