ಪಟ್ಟಣ ಸವಾಲುಗಳು ನೂರಾರು, ಬಗೆಹರಿಸುವರೆ ಹೊಸಬರು?ಕಳೆದ ಹಲವು ವರ್ಷಗಳಿಂದ ಅಧ್ಯಕ್ಷರ ಮೀಸಲಾತಿ ಗೊಂದಲದಿಂದ ರಾಜ್ಯ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದಿದೆ. ಹೀಗಾಗಿ ಕಳೆದ ವಾರದ ಹಿಂದಷ್ಟೇ ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದು ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿದೆ. ಸೆ.4 ರಂದು ನೂತನ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಮೊದಲ ಸಾಮಾನ್ಯ ಸಭೆ ಕೆರೆಯಲಾಗಿದೆ. ಆದರೆ, ನೂತನ ಅಧ್ಯಕ್ಷ, ಉಪಾಧ್ಯಕ್ಷರ ಮುಂದೆ ಪಟ್ಟಣದ ಅಭಿವೃದ್ಧಿಯ ಹಲವು ಸಮಸ್ಯೆ, ಸವಾಲುಗಳಿವೆ.