ಶಿಕ್ಷಕರನ್ನು ದೇವರಂತೆ ಪೂಜಿಸುವ ತಾಲೂಕು ಇಂಡಿಜಗತ್ತಿನಲ್ಲಿ ಶಿಕ್ಷಕರನ್ನು ಗುರು ಎಂದು ಗೌರವಿಸಲಾಗುತ್ತದೆ. ಆದರೆ, ಶಿಕ್ಷಕರನ್ನು ದೇವರೆಂದು ಗುರುತಿಸಿರುವುದು ಪ್ರಪಂಚದಲ್ಲಿ ಇಂಡಿ ತಾಲೂಕು ಎಂಬುವುದು ಅಭಿಮಾನದ ಸಂಗತಿ. ಅಥರ್ಗಾ ಗ್ರಾಮದಲ್ಲಿ ಶಿಕ್ಷಕ ರೇವಣಸಿದ್ದಪ್ಪ ಮಾಸ್ತರ್ ಹೆಸರಿನಲ್ಲಿ ಗ್ರಾಮಸ್ಥರು ದೇವಾಲಯ ನಿರ್ಮಿಸಿ ಪ್ರತಿವರ್ಷ ಜಾತ್ರೆ ಮಾಡುತ್ತಿರುವುದು ಶಿಕ್ಷಕ ಬಳಗಕ್ಕೆ ಹೆಮ್ಮೆಯ ವಿಷಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.