ತಂಬಾಕು ಸೇವನೆಯಿಂದಲೇ ಹೆಚ್ಚಾದ ಭಯಾನಕ ರೋಗಗಳುಇತ್ತೀಚಿನ ದಿನಗಳಲ್ಲಿ ತಂಬಾಕು ಸೇವನೆ ಪಿಡುಗು ಹೆಚ್ಚಾಗುತ್ತಿದ್ದು, ಬಾಯಿ ಹುಣ್ಣು, ಅನ್ನನಾಳ, ಶ್ವಾಸಕೊಶ, ಮೂತ್ರಕೋಶ, ಗಂಟಲು ಕ್ಯಾನ್ಸರ್ ನಂತಹ ಭಯಾನಕ ರೋಗಗಳು ತಂಬಾಕು ಸೇವನೆಯಿಂದಲೇ ಹೆಚ್ಚಾಗಿ ಬರುತ್ತಿವೆ. ಇದರ ಅರಿವು ಸಾಮಾನ್ಯ ಜನರಿಗೆ ಗೊತ್ತಿಲ್ಲ, ಗೊತ್ತಿದ್ದರೂ ಸಹ ನಿರ್ಲಕ್ಷ್ಯ ಮಾಡುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ ಎಂದು ವಿಜಯಪುರ ತಾಲೂಕು ಆರೋಗ್ಯ ಅಧಿಕಾರಿ ಡಾ.ಪರಶುರಾಮ ಹಿಟ್ನಳ್ಳಿ ಹೇಳಿದರು.