ನಂದಿ ಕಾರ್ಖಾನೆಯಲ್ಲಿ ದಿ.ಬಿ.ಟಿ.ಪಾಟೀಲ ಪುಣ್ಯಸ್ಮರಣೆವಿಜಯಪುರ: ಬಬಲೇಶ್ವರ ತಾಲೂಕಿನ ಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಮುಖ್ಯ ಪ್ರವರ್ತಕ ದಿ.ಬಿ.ಟಿ.ಪಾಟೀಲರ 24ನೇ ಪುಣ್ಯಸ್ಮರಣೆ ಆಚರಿಸಲಾಯಿತು. ಕಾರ್ಖಾನೆಯ ಆಡಳಿತ ಕಚೇರಿ ಮುಂಭಾಗದಲ್ಲಿನ ದಿ.ಬಿ.ಟಿ.ಪಾಟೀಲರ ಕಂಚಿನ ಪುತ್ಥಳಿಗೆ ಪೂಜೆ ಸಲ್ಲಿಸಿ, ಕಾರ್ಖಾನೆ ಅಧ್ಯಕ್ಷ ಕುಮಾರ ದೇಸಾಯಿ, ಉಪಾಧ್ಯಕ್ಷ ಅಶೋಕ ಲೆಂಕೆಣ್ಣವರ, ನಿರ್ದೇಶಕ ಬಿ.ಡಿ.ಪಾಟೀಲ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.