ಯಾದಗಿರಿ: ಸಂಭ್ರಮದ ಜರುಗಿದ ಮೈಲಾಪುರ ಜಾತ್ರೆಯಾದಗಿರಿ ಸಮೀಪದ ಮೈಲಾಪುರದ ಮೈಲಾರಲಿಂಗಶ್ವರ ಜಾತ್ರೆ ನಿನ್ನೆ ಸಡಗರದಿಂದ ನೆರೆವೇರಿತು. ಜಾತ್ರೆಯಲ್ಲಿ ಹರಕೆಯ ಕುರಿಗಳ ಎಸೆತಕ್ಕೆ ನಿಷೇಧ ಹೇರಿದ ಹಿನ್ನೆಲೆ ಕುರಿ ಉಣ್ಣೆ ಎಸೆದು ಭಕ್ತರು ಹರಕೆ ತೀರಿಸಿದ್ದಾರೆ. 400ಕ್ಕೂ ಹೆಚ್ಚು ಕುರಿಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಿಂದ ಲಕ್ಷಾಂತರ ಭಕ್ತರ ಈ ಜಾತ್ರೆಗೆ ಆಗಮಿಸುತ್ತಾರೆ.