₹1.66 ಕೋಟಿ ಡ್ರಗ್ಸ್ ಜಪ್ತಿ: ಇಬ್ಬರು ವಿದೇಶಿಗರು ಸೇರಿ ಐವರ ಸೆರೆವಿಜಯಪುರ ಜಿಲ್ಲೆಯಿಂದ ಗಾಂಜಾ ತಂದು ಬೆಂಗಳೂರಲ್ಲಿ ಮಾರಾಟ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಂಬೇಡ್ಕರ್ ನಗರದ ವಿಜಯ್ ಕುಮಾರ್, ವಿಜಯಪುರ ಜಿಲ್ಲೆಯ ವಿಜಯ್ ಕುಮಾರ್ ಅಲಿಯಾಸ್ ಪವರ್, ಐವರಿಕೋಸ್ಟ್ ದೇಶದ ಅರ್ಮೆಲ್ ಬಂಧಿತರಾಗಿದ್ದು, ಆರೋಪಿಗಳಿಂದ 203.46 ಗ್ರಾಂ ಎಂಡಿಎಂಎ, 156 ಗ್ರಾಂ ಎಕ್ಸ್ಟೈಸಿ ಹಾಗೂ 18.5 ಕೇಜಿ ಗಾಂಜಾ ಸೇರಿದಂತೆ ₹1.66 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.