ರೈತರ ಸುದೀರ್ಘ ಹೋರಾಟಕ್ಕೆ ಸಿಕ್ಕ ಯಶಸ್ಸು: ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸತ್ಯಂಪೇಟೆಕಾಲುವೆ ನೀರಿಗಾಗಿ 21 ದಿನಗಳ ಕಾಲ ಸತತ ಆಹೋ ರಾತ್ರಿ ಧರಣಿ ನಡೆಸಿ, ಸರ್ಕಾರ ಮನವಿಗೆ ವಿಳಂಬ ನೀತಿ ಅನುಸರಿಸಿತು. ಕುಣಿ ತೋಡಿ ಜೀವಂತ ಸಮಾಧಿಯಾಗಲು ರೈತರು, ಮುಖಂಡರು ಸಿದ್ಧರಾಗಿದ್ದ ವೇಳೆ ಸರ್ಕಾರ ರೈತರ ಹೋರಾಟಕ್ಕೆ ಮಣೆದು 2.75 ಟಿಎಂಸಿ ನೀರು ಬಿಡಲು ಒಪ್ಪಿ ಆದೇಶ ಹೊರಡಿಸಿದೆ.