ಆರ್ಸಿಬಿ ವಿಜಯೋತ್ಸವಲ್ಲಿ ಕಾಲ್ತುಳಿತ: ಮೃತ ಶಿವಲಿಂಗನ ಮನೆಗೆ ಛಲವಾದಿ ನಾರಾಯಾಣ ಸ್ವಾಮಿ ಭೇಟಿವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಾಣ ಸ್ವಾಮಿ ಅವರು ಗುರುವಾರ ತಾಲೂಕಿನ ಹೊನಗೇರಾ ಗ್ರಾಮದ ಮೃತ ಶಿವಲಿಂಗ ಕುಂಬಾರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಆರ್ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತದಲ್ಲಿ ಶಿವಲಿಂಗ ಮೃತಪಟ್ಟಿದ್ದರು.