ವಡಗೇರಾ: ಅಟ್ರಾಸಿಟಿ ಕೇಸ್ ಬೆದರಿಕೆ: ಯುವಕ ಆತ್ಮಹತ್ಯೆಜಮೀನಿಗೆ ತೆರಳುವ ದಾರಿ ವಿಚಾರವಾಗಿನ ವಿವಾದದಲ್ಲಿ ಜಾತಿನಿಂದನೆ (ಅಟ್ರಾಸಿಟಿ) ಪ್ರಕರಣ ದಾಖಲಿಸಿ, ಜೈಲಿಗಟ್ಟುವುದಾಗಿ ದಲಿತ ಸಮುದಾಯದ ಕೆಲವರು ಬೆದರಿಕೆ ಹಾಕಿದ್ದರಿಂದ, ಮನನೊಂದಿದ್ದನೆನ್ನಲಾದ 19 ವರ್ಷದ ಯುವಕನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು, ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ವರದಿಯಾಗಿದೆ. ಇತ್ತ, ಮಗನ ಸಾವು ಕಣ್ಣಾರೆ ಕಂಡು ಆಘಾತಕ್ಕೊಳಗಾದ ತಂದೆ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತಂದೆ-ಮಗನ ಇಂತಹ ದುರಂತದ ಸಾವು ಇಡೀ ಕುಟುಂಸ್ಥರ ಆಕ್ರೋಶ- ಆಕ್ರಂದನಕ್ಕೆ ಸಾಕ್ಷಿಯಾಗಿದೆ.