ಜೂನ್ 26ಕ್ಕೆ ‘ಕನ್ನಡಪ್ರಭ’ ಪತ್ರಿಕೆಯಿಂದ ನೇರ ಫೋನ್ ಇನ್ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ.60ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಸರ್ಕಾರಿ ಪ್ರೌಢಶಾಲೆಗಳಿಗೆ ನೋಟಿಸ್ ಜಾರಿ ಮಾಡಿ, ಮುಖ್ಯ ಶಿಕ್ಷಕರ ವಿರುದ್ಧ ಶಿಸ್ತುಕ್ರಮಕ್ಕೆ ಸೂಚಿಸಿರುವ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಆದೇಶ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ನೀಡಿದಂತಿದೆ. ಸಾವಿರಾರು ಶಿಕ್ಷಕರ ಕೊರತೆ, ಶಾಲೆಗಳಲ್ಲಿನ ಅವ್ಯವಸ್ಥೆಗಳ ಮಧ್ಯೆಯೂ ಉತ್ತಮ ಫಲಿತಾಂಶಕ್ಕೆ ಪ್ರಾಮಾಣಿಕವಾಗಿ ದುಡಿದ ಜಿಲ್ಲೆಯ ಶಿಕ್ಷಕರ ವಲಯಕ್ಕೆ ಇದು ಆಘಾತ ಮೂಡಿಸಿದೆ.