೧೫ ಕಿವುಡ ಮಕ್ಕಳಿಗೆ ಉಚಿತ ಕಾಕ್ಲಿಯರ್ ಕಸಿ ಶಸ್ತ್ರಚಿಕಿತ್ಸೆಮಂಡ್ಯ ಸೇರಿದಂತೆ ಕಲಬುರಗಿ, ರಾಯಚೂರು, ಚಾಮರಾಜನಗರ ಜಿಲ್ಲೆಗಳ ೮ ಹೆಣ್ಣು ಮಕ್ಕಳು ಹಾಗೂ ೭ ಗಂಡು ಮಕ್ಕಳು ಸೇರಿ ಒಟ್ಟು ೧೫ ಮಕ್ಕಳಿಗೆ ಖ್ಯಾತ ಇಎನ್ಟಿ ತಜ್ಞ ಡಾ.ಶಂಕರ್ ಮಡಿಕೇರಿ ಮಾರ್ಗದರ್ಶನದಲ್ಲಿ ಕಾಕ್ಲಿಯರ್ ಕಸಿ ಶಸ್ತ್ರಚಿಕಿತ್ಸೆಯನ್ನು ಮಿಮ್ಸ್ ಇಎನ್ಟಿ ವಿಭಾಗದ ಸರ್ಜನ್ಗಳು ಯಶಸ್ವಿಯಾಗಿ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆಯ ಮೂರು ವಾರಗಳ ನಂತರ ಶಸ್ತ್ರಚಿಕಿತ್ಸೆಗೆ ಒಳಪಡಿಸಿದವರನ್ನು ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣಸಂಸ್ಥೆಯಲ್ಲಿ ಶ್ರವಣ ಮೌಖಿಕ ತರಬೇತಿಗೆ ಕಳುಹಿಸಲಾಗುವುದು. ಒಂದು ವರ್ಷದವರೆಗೆ ಮಕ್ಕಳಿಗೆ ತರಬೇತಿ ಮುಂದುವರೆಯುತ್ತದೆ. ಈಗಾಗಲೇ ತರಬೇತಿ ಮುಗಿಯುವ ಹಂತದಲ್ಲಿರುವ ಇಬ್ಬರು ಮಕ್ಕಳು ಎರಡಕ್ಷರದ ಪದಗಳನ್ನು ಉಚ್ಛಾರ ಮಾಡುತ್ತಿರುವುದು ಕಾಕ್ಲಿಯರ್ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯ ಸಾಧನೆಯಾಗಿದೆ.