‘ವೈಕೋಮ್ ಪೊರಾಟ್ಟಂ’ಕನ್ನಡ ಅನುವಾದ ಕೃತಿ ಬಿಡುಗಡೆ ಮಾಡಿದ ಸ್ಟಾಲಿನ್ನವದೆಹಲಿ: ಮುಂಬರುವ ಸಂಸತ್ ಅಧಿವೇಶನಕ್ಕೆ ಲೋಕಸಭಾ ಸಚಿವಾಲಯ 18 ಮಸೂದೆಗಳನ್ನು ಪಟ್ಟಿ ಮಾಡಿದ್ದು, ಡಿ.4ರಿಂದ ಆರಂಭವಾಗುವ ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ. ಮಸೂದೆಗಳ ಪೈಕಿ ಪ್ರಮುಖವಾಗಿ ಮಹಿಳಾ ಮಸೂದೆಯನ್ನು ಜಮ್ಮು-ಕಾಶ್ಮೀರ ಮತ್ತು ಪಾಂಡಿಚೆರಿಗೂ ವಿಸ್ತರಿಸುವ ಕುರಿತಾಗಿ 2, ಅಪರಾಧ ಕಾನೂನುಗಳ ಕುರಿತಾಗಿ 3 ಮತ್ತು ಜಮ್ಮು ಕಾಶ್ಮೀರದ ವಿಧಾನಸಭೆಯ ಸಂಖ್ಯಾಬಲವನ್ನು 114ಕ್ಕೆ ಹೆಚ್ಚಳ ಮಾಡಿ ಕಾಶ್ಮೀರಿ ವಲಸಿಗರು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಸ್ಥಳಾಂತರಗೊಂಡವರು ಹಾಗೂ ಬುಡಕಟ್ಟು ಜನಾಂಗದವರಿಗೆ ಮೀಸಲಾತಿ ಕಲ್ಪಿಸುವ ಕುರಿತಂತೆ 4, ಚುನಾವಣಾ ಆಯುಕ್ತರನ್ನು ನೇಮಿಸಲು ಪ್ರಧಾನಮಂತ್ರಿ ನೇತೃತ್ವದಲ್ಲಿ ಸಮಿತಿ ರಚಿಸುವ ಕುರಿತಂತೆ 1, ಹಾಗೆಯೇ ಅಂಚೆ, ಪತ್ರಿಕೆ, ದೆಹಲಿ, ಕೇಂದ್ರೀಯ ವಿಶ್ವವಿದ್ಯಾನಿಲಯಗಳು, ವಕೀಲರಿಗೆ ಸಂಬಂಧಿಸಿದ ಮಸೂದೆಗಳು ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ.