ಮಾತೃಭಾಷೆಯನ್ನು ಮರೆತರೆ ಹೆತ್ತತಾಯಿಯನ್ನು ಮರೆತಂತೆನಾವು ಮಾತೃಭಾಷೆ ಕನ್ನಡವನ್ನು ಮರೆತರೆ ಹೆತ್ತ ತಾಯಿಯನ್ನು ಮರೆತಂತೆ, ಹಾಗಾಗಿ ಇತರೆ ಭಾಷೆಗಳನ್ನು ಗೌರವಿಸಿ, ನಮ್ಮ ಕನ್ನಡ ಭಾಷೆಯನ್ನು ಮಾತ್ರ ಪ್ರೀತಿಸಬೇಕು. ಗ್ರಾಮೀಣ ಜನರಿಂದ ಮಾತ್ರ ಕನ್ನಡ ಭಾಷೆಯು ಜೀವಂತವಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.ಮಧುಗಿರಿಯ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಗಡಿನಾಡ ಸಾಹಿತ್ಯ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಬರಗೂರು ರಾಮಚಂದ್ರಪ್ಪ ಗಡಿನಾಡ ಸಾಹಿತ್ಯ ಸಮ್ಮೇಳನ ನಡೆಸಲು ಸಚಿವ ರಾಜಣ್ಣನವರಿಗೆ ಸಲಹೆ ನೀಡಿದ ಹಿನ್ನೆಲೆ ಸಚಿವರು ಗಡಿನಾಡ ಭಾಷೆಯ ಕವಿಗಳನ್ನು ಒಗ್ಗೂಡಿಸಿ, ಮಾರ್ಚ್ ತಿಂಗಳಲ್ಲಿ ತಾಲೂಕಿನಲ್ಲಿಯೇ ಗಡಿನಾಡ ಸಾಹಿತ್ಯ ಸಮ್ಮೇಳನ ನಡೆಸಲು ಭರವಸೆ ನೀಡಿ, ಅವರು ಮಾತನಾಡಿದರು.