ಅಂಬೇಡ್ಕರ್ ಕುರಿತು ಜನರಿಗೆ ಗೊತ್ತಿರುವುದು ಸಂವಿಧಾನ ಶಿಲ್ಪಿ, ಮೀಸಲಾತಿ ಜನಕ, ದಲಿತರ ನಾಯಕ, ಮನುಸ್ಮೃತಿ ಸುಟ್ಟವರು, ಬೌದ್ಧಧರ್ಮ ಸೇರಿದವರು, ಪ್ರತಿಮೆಯಾಗಿರುವವರು- ಇಷ್ಟು ವಿಚಾರಗಳು ಮಾತ್ರ. ಅಂಬೇಡ್ಕರ್ ಅವರ ಕೊಡುಗೆಗಳು ಅದರಾಚೆಗೂ ಇವೆ ಎಂಬುದನ್ನು ಅಪ್ಪಗೆರೆ ಸೋಮಶೇಖರ್ ನಿರೂಪಿಸಿದ್ದಾರೆ.
ಅಂತರಜಾತಿ ವಿವಾಹ ಮತ್ತು ಸಾಮಾಜಿಕ ಸಮಾನತೆ ಕೃತಿಯಲ್ಲಿ ಹತ್ತು ಹಲವು ಲೇಖನಗಳಿವೆ. ಕಳೆದ ವರ್ಷ ಕಾರ್ಯಕ್ರಮದಲ್ಲಿ ಗಣ್ಯರು ಮಾಡಿದ ಭಾಷಣಕ್ಕೆ ಅಕ್ಷರರೂಪ ನೀಡಿ ಪ್ರಕಟಿಸಲಾಗಿದೆ.