ಮನೆಯಂಗಳಕ್ಕೆ ಚರಂಡಿ ನೀರು: ಉಕ್ಕಡಗಾತ್ರಿ ಜನ ಹೈರಾಣ!
Jul 17 2024, 12:52 AM ISTರಾಜ್ಯಾದ್ಯಂತ ಡೆಂಘೀಜ್ವರ ಮತ್ತು ಚಿಕೂನ್ ಗುನ್ಯಾ ಬಾಧೆಗೆ ಅನೇಕ ಮಕ್ಕಳು, ನಾಗರೀಕರು ನರಳುತ್ತಿದ್ದಾರೆ. ಕೆಲವೆಡೆ ಮರಣವೂ ಸಂಭವಿಸಿದೆ. ಆರೋಗ್ಯ ಇಲಾಖೆ ಲಾರ್ವಾ ಸಮೀಕ್ಷೆಗೆ ಆದೇಶ ನೀಡಿದೆ. ಆದರೆ ಹರಿಹರ ತಾಲೂಕು ಉಕ್ಕಡಗಾತ್ರಿ ಗ್ರಾಮದಲ್ಲಿ ಸ್ಥಳೀಯ ಆಡಳಿತ ಮತ್ತು ಆರೋಗ್ಯ ಇಲಾಖೆ ಮಾತ್ರ ಡೆಂಘೀ, ಚಿಕೂನ್ ಗುನ್ಯಾ ನಿಯಂತ್ರಣಕ್ಕೆ ಯಾವುದೇ ಕ್ರಮ ಜರುಗಿಸದೇ ನಿರ್ಲಕ್ಷ್ಯ ವಹಿಸಿದಂತಿದೆ.