95 ಗ್ರಾಂ ಚಿನ್ನ, 250 ಗ್ರಾಂ ಬೆಳ್ಳಿ ಕಳ್ಳತನ
May 18 2024, 12:43 AM ISTಕನ್ನಡಪ್ರಭ ವಾರ್ತೆ ಬೈಲಹೊಂಗಲ: ಮನೆಯ ತಿಜೋರಿಯಲ್ಲಿದ್ದ ₹4.66 ಲಕ್ಷ ಮೌಲ್ಯದ 95 ಗ್ರಾಂ ತೂಕದ ಬಂಗಾರದ ಆಭರಣ, 250 ಗ್ರಾಂ ತೂಕದ ಬೆಳ್ಳಿಯ ಆಭರಣ ಸೇರಿದಂತೆ ನಗದು ಹಣವನ್ನು ಹಾಡುಹಗಲೇ ಕಳ್ಳತನ ಮಾಡಿರುವ ಘಟನೆ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಾಯನಗೌಡ ಪಾಟೀಲ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ.