ಕಾಡಾನೆ ಹಿಂಡು ದಾಳಿ: ಹೊಸಕೋಟೆಯಲ್ಲಿ ವ್ಯಾಪಕ ಬೆಳೆ ಹಾನಿ
Nov 27 2024, 01:03 AM ISTಬಿಳುಗುಂದ ಗ್ರಾ. ಪಂ. ವ್ಯಾಪ್ತಿಯ ಹೊಸಕೋಟೆ ಗ್ರಾಮದ ಕಾಫಿ ತೋಟಗಳಿಗೆ ಸೋಮವಾರ ರಾತ್ರಿ ನುಗ್ಗಿದ ಕಾಡಾನೆಗಳ ಹಿಂಡು ಬೆಳೆಗಳನ್ನು ಸಂಪೂರ್ಣ ನಾಶ ಮಾಡಿದೆ. ಇದರಿಂದ ಫಸಲಿಗೆ ಬಂದಿದ್ದ ಲಕ್ಷಾಂತರ ರು. ಮೌಲ್ಯದ ಕಾಫಿ, ಅಡಕೆ, ಬಾಳೆ, ತೆಂಗು ಬೆಳೆಗಳು ಕಾಡಾನೆಗಳ ದಾಳಿಗೆ ತುತ್ತಾಗಿದ್ದು, ಬೆಳಗಾರರಿಗೆ ಅಪಾರ ಪ್ರಮಾಣದ ನಷ್ಟವಾಗಿದೆ.