ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿ
Jul 26 2024, 01:43 AM ISTಸತತವಾಗಿ ಮಹಾರಾಷ್ಟ್ರದಲ್ಲಿ ಬಿಟ್ಟೂ ಬಿಡದೇ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಘಟಪ್ರಭಾ ನದಿಯ ನೀರು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರಿಂದ ಸುತ್ತಲಿನ ನಂದಗಾಂವ, ಢಳವೇಶ್ವರ, ಮಿರ್ಜಿ ಸೇತುವೆಗಳು ತುಂಬಿ ರಸ್ತೆ ಸಂಚಾರ ಬಂದಾಗಿದೆ. ಅಷ್ಟೇ ಅಲ್ಲದೇ ರಭಸದಿಂದ ಬರುತ್ತಿರುವ ನೀರಿನ ಒತ್ತಡಕ್ಕೆ ನೀರು ನದಿ ತಟದಲ್ಲಿರುವ ರೈತರ ಜಮೀನುಗಳಿಗೆ ನುಗ್ಗಿ ಅಪಾರ ಬೆಳೆ ಹಾನಿಯುಂಟು ಮಾಡಿದೆ.