ವಾಹನ, ವಾಣಿಜ್ಯಕ್ಕೆ ಗೃಹ ಬಳಕೆ ಸಿಲಿಂಡರ್ ಬಳಕೆಗೆ ಕಡಿವಾಣ ಹಾಕಿ
Jul 28 2024, 02:06 AM ISTಸರ್ಕಾರಗಳಿಗೆ ಕೋಟ್ಯಂತರ ರು. ನಷ್ಟ ಮತ್ತು ಭೀಕರ ಸ್ಫೋಟಗಳ ಸೃಷ್ಟಿಸಿ, ಸಾವು-ನೋವುಗಳ ಅಪಾಯ ತಂದೊಡ್ಡಬಲ್ಲ ರೀತಿಯಲ್ಲಿ ದಾವಣಗೆರೆ ಸೇರಿದಂತೆ ಹಲವಾರು ಕಡೆಗಳಲ್ಲಿ ಗೃಹ ಬಳಕೆ ಗ್ಯಾಸ್ ಸಿಲಿಂಡರ್ಗಳನ್ನು ಬಳಸಲಾಗುತ್ತಿದೆ. ವಾಹನಗಳು ಮತ್ತು ವಾಣಿಜ್ಯ ಸ್ಥಳಗಳಲ್ಲಿಯೇ ವ್ಯಾಪಕ ಹಾಗೂ ಅಸುರಕ್ಷಿತವಾಗಿ ಸಿಲಿಂಡರ್ಗಳ ಬಳಕೆ ಮಿತಿಮೀರಿದೆ. ಈ ಹಿನ್ನೆಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ದುರ್ಬಳಕೆ ತಡೆಗೆ ಸರ್ಕಾರ ಸೂಕ್ತ ರೀತಿಯಲ್ಲಿ ಕಡಿವಾಣ ಹಾಕಿ, ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಹಕ ದಕ್ಷತಾ ಕಲ್ಯಾಣ ಫೌಂಡೇಶನ್ ಒತ್ತಾಯಿಸಿದೆ.