ವಿಶ್ವೇಶ್ವರಯ್ಯನವರ ಆದರ್ಶಗಳು ನಮ್ಮೆಲ್ಲರಿಗೆ ಸ್ಫೂರ್ತಿಯಾಗಲಿ: ಶಾಸಕ ಲಕ್ಷ್ಮಣ ಸವದಿ
Oct 07 2024, 01:35 AM ISTಜಗತ್ತಿನ ತಂತ್ರಜ್ಞಾನದಲ್ಲಿ ಎಂಜಿನಿಯರ್ ಗಳ ಪಾತ್ರ ಹಿರಿದಾಗಿದೆ. ನಾಡಿನ ಮತ್ತು ದೇಶದ ಶ್ರೇಷ್ಠ ಎಂಜಿನಿಯರ್ ಗಳು ಮಾಡಿದ ಕಾರ್ಯಗಳು ಸಾರ್ವಜನಿಕರಿಗೆ ಚಿರಸ್ಥಾಯಿಯಾಗಿ ಇಂದಿಗೂ ಉಳಿದುಕೊಂಡಿವೆ. ತಮ್ಮ ಕೆಲಸದಲ್ಲಿ ಬದ್ಧತೆ, ದೂರ ದೃಷ್ಟಿ ಇಟ್ಟುಕೊಂಡು ಕೆಲಸ ಮಾಡಬೇಕು. ಅವಕಾಶ ಸಿಕ್ಕಾಗ ವಿದೇಶಗಳಿಗೆ ಭೇಟಿ ನೀಡಿ ಎಂಜಿನಿಯರ್‌ಗಳ ಕೌಶಲ್ಯವನ್ನು ಅಧ್ಯಯನ ಮಾಡಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.