ರಾಜ್ಕುಮಾರ್ ರಸ್ತೆಗೆ ಶಾಸಕ ಬಾಲಕೃಷ್ಣ ಗುದ್ದಲಿ ಪೂಜೆ
Jan 28 2025, 12:47 AM ISTಲೋಕೋಪಯೋಗಿ ಇಲಾಖೆಯ ಒನ್ ಟೈಮ್ ಇಂಪ್ರ್ಯೂಮೆಂಟ್ ಕಾರ್ಯಕ್ರಮದ ಅಡಿ ೨ ಕೋಟಿ ರು. ವೆಚ್ಚದಲ್ಲಿ ರಸ್ತೆ ಮರು ಡಾಂಬರೀಕರಣ, ಡ್ರೈನೇಜ್ ದುರಸ್ತಿ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ಹೇಳಿದರು. ತಾಲೂಕು ಪಂಚಾಯಿತಿ ಸಮೀಪದ ವಾಣಿಜ್ಯ ಸಂಕೀರ್ಣವನ್ನು ನೂತನವಾಗಿ ನಿರ್ಮಾಣ ಮಾಡಲು ಟೆಂಡರ್ ಆಹ್ವಾನ ಮಾಡಲಾಗುವುದು. ಪುರಸಭೆಯ ಪುರಭವನದ ಕಾಮಗಾರಿ ಮೊದಲನೇ ಅಂತಸ್ತು ಪೂರ್ಣಗೊಂಡಿದ್ದು, ಹೆಚ್ಚಿನ ಅನುದಾನವನ್ನು ನೀಡಲಾಗುವುದು ಎಂದು ತಿಳಿಸಿದರು.