ಸಾಮಾನ್ಯರಿಗೂ ಅರ್ಥವಾಗಬಲ್ಲ ಚುಟುಕು ಸಾಹಿತ್ಯ
Nov 04 2024, 12:35 AM ISTಒಂದು ವಿಷಯ ಅತಿ ಬೇಗನೇ ಜನರ ಮನಸ್ಸನ್ನು ಮುಟ್ಟುವಂತೆ ಮಾಡುವ ವಿಶೇಷತೆ ಚುಟುಕು ಸಾಹಿತ್ಯದಾಗಿದೆ. ಇದು ಸಾಮಾನ್ಯ ವ್ಯಕ್ತಿಗೂ ಅರ್ಥವಾಗಬಲ್ಲದು. ಆ ಮೂಲಕ ಓದುಗನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಅಂತಹ ಸಾಹಿತ್ಯದ ಸೇವೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಘಟಕ ಮಾಡುತ್ತಿದೆ ಎಂದು ಮಾಜಿ ನಗರಸಭಾ ಅಧ್ಯಕ್ಷ, ಕನ್ನಡಪರ ಹೋರಾಟಗಾರ ಕೆ.ಜಿ. ಶಿವಕುಮಾರ ದಾವಣಗೆರೆಯಲ್ಲಿ ಹೇಳಿದ್ದಾರೆ.