ಶಿಕಾರಿಪುರ ಯಾತ್ರಿನಿವಾಸ ನಿರ್ವಹಣೆ ಮರೆತ ಸರ್ಕಾರ: ಕೃಷ್ಣ ಹುಲಗಿ ಆರೋಪ
Dec 07 2023, 01:15 AM ISTಸಾರ್ವಜನಿಕರ ಆಸ್ತಿ ಆಗಿರುವ ಕಟ್ಟಡವನ್ನು ಬಾಡಿಗೆ ಆಧಾರದಲ್ಲಿ ಸ್ಥಳೀಯ ಸಂಘ ಸಂಸ್ಥೆಗೆ ವಹಿಸಿದಲ್ಲಿ ಸರ್ಕಾರಕ್ಕೆ ಆದಾಯದ ಜತೆಗೆ, ಸಾರ್ವಜನಿಕರಿಗೂ ಉಪಯೋಗವಾಗಲಿದೆ. ಯಾತ್ರಿ ನಿವಾಸದಲ್ಲಿನ ಅವ್ಯವಸ್ಥೆಯಿಂದಾಗಿ ಸುತ್ತಮುತ್ತಲಿನ ದೇವಸ್ಥಾನ, ಉದ್ಯಾವನ, ಮಠ ಮಂದಿರದ ಮಹತ್ವ, ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಪರಸ್ಥಳದಿಂದ ನಿತ್ಯ ನೂರಾರು ಭಕ್ತರು ಶ್ರೀ ಹುಚ್ಚುರಾಯನ ದರ್ಶನಕ್ಕೆ ಧಾವಿಸುತ್ತಿದ್ದಾರೆ. ಇವರಿಗೆ ತಂಗಲು ಯಾತ್ರಿ ನಿವಾಸ ಇಲ್ಲದೇ ಸಮಸ್ಯೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.