ಇತಿಹಾಸ ಪ್ರಸಿದ್ಧ ಶ್ರೀಗವಿರಂಗನಾಥಸ್ವಾಮಿ ಅದ್ಧೂರಿ ಬ್ರಹ್ಮ ರಥೋತ್ಸವ
Jan 17 2024, 01:45 AM ISTಈ ಪುಣ್ಯ ಸ್ಥಳ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಪುರಾತನ ಕಾಲದಿಂದಲೂ ಗೋ ರಕ್ಷಕನಾಗಿ ಶ್ರೀಗವಿರಂಗಪ್ಪಸ್ವಾಮಿ ರೈತರ ಬದುಕಿನ ಜೀವಾಳದಂತಿದ್ದಾನೆ. ದನಕರುಗಳಿಗೆ ಆರೋಗ್ಯ ಕೆಟ್ಟಾಗ ಮೈಮೇಲೆ ತೀರ್ಥ ಸಿಂಪಡಿಸಿದರೆ ರೋಗಗಳು ನಿವಾರಣೆಯಾಗುತ್ತವೆ ಎಂಬ ಪ್ರತೀತಿ ಇದೆ. ಅದರಂತೆ ತಾಲೂಕು, ಜಿಲ್ಲೆ ಸೇರಿದಂತೆ ವಿವಿಧ ಸ್ಥಳಗಳಿಂದ ಭಕ್ತರು ತಮ್ಮ ದನಕರುಗಳು ಅನಾರೋಗ್ಯಕ್ಕೆ ತುತ್ತಾದಾಗ, ತಮ್ಮ ಸಂತತಿ ವೃದ್ದಿಯಾದಾಗ ಹಾಗೂ ಪ್ರತಿ ವರ್ಷಕ್ಕೊಮ್ಮೆ ಇಲ್ಲಿ ನಡೆಯುವ ಜಾತ್ರೆಗೆ ಆಗಮಿಸುತ್ತಾರೆ.