ಕಲಬುರಗಿ ವರ್ತುಲ ರಸ್ತೆ, ಸೇವಾ ರಸ್ತೆ ಗ್ರಹಣ ಮೋಕ್ಷ
Feb 03 2024, 01:46 AM ISTರಿಂಗ್ ರಸ್ತೆಯ ಸರ್ವೀಸ್ ರಸ್ತೆ ಸುಧಾರಣೆಗೆ ₹57 ಕೋಟಿ ಮಂಜೂರು ಮಾಡಲಾಗಿದೆ. ಅನೇಕ ಬಾರಿ ಸಚಿವರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಮೇಲಾಧಿಕಾರಿಗಳಿಗೆ ಭೇಟಿಯಾಗಿ ಅತಿಕ್ರಮಣ ಹಾಗೂ ಅಪೂರ್ಣ ಸೇವಾ ರಸ್ತೆಯಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಅದಕ್ಕೆ ಸರಿಪಡಿಸಬೇಕು ಎಂದು ಕೋರಿದಾಗ ಅದಕ್ಕೆ ಮನ್ನಣೆ ಕೊಟ್ಟು ಹಣ ಮಂಜೂರು ಮಾಡಿದ್ದಾರೆ ಎಂದು ಸಂಸದ ಉಮೇಶ್ ಜಾಧವ್ ಮಾಹಿತಿ ನೀಡಿದರು.