ನಾಳೆಯಿಂದ ಬಾಕ್ಸ್ ಕ್ರಿಕೆಟ್ 30(ರ್ಯಾಡ್) ಪಂದ್ಯಾವಳಿ
Nov 13 2024, 12:00 AM ISTಸ್ಮಾರ್ಟ್ ಶಿವಮೊಗ್ಗ ಡೆವಲಪರ್ಸ್ ಅಂಡ್ ಬಿಲ್ಡರ್ಸ್ ಪ್ರಾಯೋಜಕತ್ವದಲ್ಲಿ, ಸಿಹಿಮೊಗ್ಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಲಬ್ ಹಾಗೂ ಬಾಂಡ್ ಇಲೆವೆನ್ ಕ್ರಿಕೆಟ್ ಕ್ಲಬ್ ಸಹಯೋಗದಲ್ಲಿ ನ.14, 15, 16 ಮತ್ತು 17ರಂದು ಗೋಪಾಳ ಮೈದಾನದಲ್ಲಿ 14ನೇ ಬಾಕ್ಸ್ ಕ್ರಿಕೆಟ್ 30 (ಯಾರ್ಡ್) ಮಿನಿ ಪಿಚ್ ಹೊನಲು ಬೆಳಕಿನ ಪಂದ್ಯಕೂಟ ಆಯೋಜಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿನ್ಸೆಂಟ್ ರೋಡ್ರಿಗಸ್ ತಿಳಿಸಿದರು.