ನಾಳೆಯಿಂದ ರಾಜ್ಯಮಟ್ಟದ ಮಹಿಳಾ ಕ್ರಿಕೆಟ್ ಪಂದ್ಯಾವಳಿ
Jan 21 2025, 12:34 AM ISTವಿಜಯನಗರದಲ್ಲಿರುವ ಟೈಮ್ಸ್ ಇಂಟರ್ ನ್ಯಾಷನಲ್ ಶಾಲೆ ಆವರಣದಲ್ಲಿ ಟೈಮ್ಸ್ ಗ್ರೂಪ್ ಆಫ್ ಇನ್ಟಿಟ್ಯೂಟ್ ಸಂಯುಕ್ತಾಶ್ರಯದಲ್ಲಿ ಜ.೨೨ರಿಂದ ಜ.೨೬ರವರೆಗೂ ರಾಜ್ಯ ಮಟ್ಟದ ಲೆದರ್ ಬಾಲ್ ಮಹಿಳಾ ಕ್ರಿಕೆಟ್ ಟೂರ್ನಮೆಂಟ್ ಹಮ್ಮಿಕೊಳ್ಳಲಾಗಿದೆ ಎಂದು ಟೈಮ್ಸ್ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ತಿಳಿಸಿದರು. ಈ ಕ್ರೀಡೆಗೆ ರಾಜ್ಯದ ವಿವಿಧ ಭಾಗಗಳಿಂದ ಎಂಟು ತಂಡಗಳು ಭಾಗವಹಿಸಲಿದೆ. ಮೈಸೂರಿನಿಂದ ಇಂದು ತಂಡ, ಬೆಂಗಳೂರಿನಿಂದ ಎರಡು ತಂಡ, ಹಾಸನದಿಂದ ಒಂದು ತಂಡ, ಶಿವಮೊಗ್ಗ ಒಂದು, ಹುಬ್ಬಳಿಯಿಂದ ಹಾಗೂ ವಿಜಯಪುರ, ಬ್ರಹ್ಮಾವರದಿಂದ ಒಂದೊಂದು ತಂಡ ಪಾಲ್ಗೊಳ್ಳಲಿದೆ ಎಂದರು.