ಬೇಲೂರು ಪುರಸಭೆ ಅಧ್ಯಕ್ಷ ವಿರುದ್ಧ ವಾಮಾಚಾರ
Dec 15 2024, 02:01 AM ISTನಾನು ಯಾರಿಗೂ ಕೇಡು ಬಗೆಯುವನಲ್ಲ, ನನ್ನ ಪಕ್ಷದವರೇ ನನ್ನ ವಿರುದ್ಧ ಮಾತನಾಡುತ್ತಿದ್ದು ಅಭಿವೃದ್ಧಿ ಕೆಲಸಗಳಿಗೂ ನನ್ನ ಪಕ್ಷದ ಸದಸ್ಯರೇ ಅಡ್ಡಗಾಲು ಹಾಕುತ್ತಿದ್ದಾರೆ. ಇಂತಹ ಮಾಟ ಮಂತ್ರಗಳಿಗೆ ಹೆದರುವವನು ನಾನಲ್ಲ. ಭಗವಂತನ ಆಶೀರ್ವಾದ ನನಗಿದೆ. ಇದಕ್ಕೆಕಾಲವೇ ಉತ್ತರ ಕೊಡುತ್ತದೆ. ತಮ್ಮ ಕೊಠಡಿ ಸಮೀಪ ಇರುವ ಮರಕ್ಕೆ ಮಂತ್ರಿಸಿದ ನಿಂಬೆಹಣ್ಣು, ತಾಯತ ಸೇರಿದಂತೆ ಇನ್ನಿತರ ವಸ್ತುಗಳನ್ನು ಹಾಕಿದ್ದು, ವಾಮಾಚಾರ ನಡೆಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಎ.ಆರ್ ಅಶೋಕ್ ದೂರಿದ್ದಾರೆ.