ಬೇಲೂರು ಪುರಸಭೆ ಮಳಿಗೆಗಳ ಹರಾಜು ರದ್ದುಗೊಳಿಸಿ
Jan 14 2025, 01:03 AM ISTಒಳ್ಳೆಯ ಕೆಲಸಗಳಲ್ಲಿ ಹೆಸರು ಮಾಡುತ್ತಿರುವ ಪುರಸಭೆ ಅಧ್ಯಕ್ಷರು ಟೆಂಡರ್ ಪ್ರಕ್ರಿಯೆಯಲ್ಲಿ ಮಳಿಗೆಗಳ ಬಾಡಿಗೆಯನ್ನು ಕಡಿಮೆ ಮಾಡಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ಈ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ವಿ ಎಸ್ ಭೋಜೇಗೌಡ ಹಾಗೂ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಎಲ್ಲಿಂದಲೋ ಬಂದು ಮುಖ್ಯ ರಸ್ತೆಯಲ್ಲಿರುವ ಪುರಸಭೆ ಮಳಿಗೆಗಳ ಮೇಲೆ ಎರಡು ದಶಕಗಳಿಂದ ತನ್ನ ಹಿಡಿತ ಸಾಧಿಸುವಲ್ಲಿ ವ್ಯಾಪಾರಸ್ಥರು ಯಶಸ್ವಿಯಾಗಿದ್ದು, ಪುರಸಭೆಯವರು ಇವರ ಕೈಗೊಂಬೆಯಾಗಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಆರೋಪಿಸಿದರು.