ಆಲೂರು ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ ಅಕ್ರಮ
Jan 04 2025, 12:30 AM IST2025-2030ನೇ ಅವಧಿಯ ಆಲೂರು ಪಿ.ಎಲ್.ಡಿ ಬ್ಯಾಂಕ್ ಕಾರ್ಯಕಾರಿ ಮಂಡಳಿಯ ಚುನಾವಣೆಯಲ್ಲಿ ಬ್ಯಾಂಕಿನ ಷೇರುದಾರರಿಗೆ ಮತದಾನದ ಹಕ್ಕನ್ನು ನೀಡದೆ, ಅವೈಜ್ಞಾನಿಕವಾಗಿ ಮತದಾರ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಯಾವುದೇ ಮಾಧ್ಯಮಗಳ ಮೂಲಕವಾಗಲಿ ಅಥವಾ ಕರಪತ್ರಗಳ ಮೂಲಕವಾಗಲಿ, ಚುನಾವಣೆಯ ಪ್ರಕಟಣೆಯನ್ನು ಹೊರಡಿಸದೆ ಗೌಪ್ಯವಾಗಿ ಚುನಾವಣಾ ಪ್ರಕ್ರಿಯೆಯನ್ನು ನಡೆಸುತ್ತಿರುವುದು ಕಾನೂನು ಬಾಹಿರವಾಗಿದೆ. ತಕ್ಷಣ ಈ ಚುನಾವಣೆಯ ಪ್ರಕ್ರಿಯೆಯನ್ನು ನಿಲ್ಲಿಸಿ ಕಾನೂನುಬದ್ಧವಾಗಿ ಚುನಾವಣೆಯನ್ನು ನಡೆಸುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಆಗ್ರಹಿಸಿದೆ.